ಕಡಿಮೆಯಾಗದ ಚರ್ಮಗಂಟು ರೋಗ
ದನಕರುಗಳಲ್ಲಿ ಕಂಡುಬರುವ, ವೈರಸ್‌ನಿಂದ ಹರಡುವ ಮಾರಕ ಖಾಯಿಲೆಯಾಗಿದೆ. ಇದು ಚರ್ಮದ ಮೇಲೆ ಗಂಟು, ಜ್ವರ ಮತ್ತು ಗಾಯಗಳನ್ನು ಉಂಟುಮಾಡುತ್ತದೆ. ಇದು ಸೊಳ್ಳೆ, ನೊಣಗಳ ಮೂಲಕ ಹರಡುತ್ತಿದ್ದು, ವ್ಯಾಕ್ಸಿನೇಷನ್ ಇದ್ದರೂ ನಿಯಂತ್ರಣಕ್ಕೆ ಕಷ್ಟವಾಗುತ್ತಿದೆ, ರೈತರನ್ನು ಹೈರಾಣಾಗಿಸಿದೆ.
ದೇವದುರ್ಗ: ಅರಕೇರಾ ಪಟ್ಟಣದ ವಿವಿಧೆಡೆ ಜಾನುವಾರುಗಳಿಗೆ ಮತ್ತೆ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಇದರಿಂದಾಗಿ ಜಾನುವಾರುಗಳು ಮೇವು ತಿನ್ನದೇ ಅನಾರೋಗ್ಯಕ್ಕೆ ತುತ್ತಾಗುತ್ತಿವೆ.
ಕಳೆದ ವರ್ಷ ತಾಲ್ಲೂಕಿನಾದ್ಯಂತ ನೂರಾರು ಜಾನುವಾರುಗಳಲ್ಲಿ ಚರ್ಮಗಂಟುರೋಗ ಕಾಣಿಸಿಕೊಂಡಿತ್ತು. ಈಗ ಬೇಸಿಗೆಯಲ್ಲಿ ಮತ್ತೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ರೈತರು ಆತಂಕಗೊಂಡಿದ್ದಾರೆ.
ತಾಲ್ಲೂಕಿನಲ್ಲಿ ಬರಗಾಲದಿಂದಾಗಿ ಮೇವಿಗಾಗಿ ಪರದಾಡಿದ್ದ ರೈತರು, ಪಕ್ಕದ ತಾಲ್ಲೂಕು ಹಾಗೂ ಬೇರೆ ಜಿಲ್ಲೆಗಳಿಂದ ಮಾರಾಟ ಜಾನುವಾರಗಳನ್ನು ಮಾಡದೇ ಸಾಕಾಣಿಕೆ ಮಾಡುತ್ತಿದ್ದಾರೆ. ಆದರೆ ಕಳೆದ ವರ್ಷದಂತೆ ಮತ್ತೆ ಚರ್ಮಗಂಟು ರೋಗ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಆರಂಭದಲ್ಲಿ ಒಂದೆರಡು ಜಾನುವಾರುಗಳಿಗೆ ತಗಲುವ ರೋಗ 3-4 ದಿನಗಳಲ್ಲಿ ಬಹುತೇಕ ಪಕ್ಕದ ಎಲ್ಲ ಜಾನುವಾರುಗಳಿಗೂ ಹರಡುತ್ತಿದೆ.
ಚರ್ಮ ಗಂಟು ರೋಗ ಕಡಿಮೆ ಅವಧಿಯಲ್ಲಿ ವೇಗವಾಗಿ ಹರಡುವ ಸಾಂಕ್ರಾಮಿಕ ರೋಗವಾಗಿದೆ. ರೋಗ ತಗುಲಿದ ಜಾನುವಾರುಗಳನ್ನು ಕಚ್ಚಿದ ಸೊಳ್ಳೆ, ಉಣ್ಣೆ, ನೊಣ ಹಾಗೂ ವಿವಿಧ ಕೀಟಗಳು ಆರೋಗ್ಯವಂತ ಜಾನುವಾರುಗಳಿಗೆ ಕಚ್ಚಿದರೆ, = ಅವುಗಳಿಗೂ ರೋಗ ಹರಡುತ್ತದೆ.
ದೇವದುರ್ಗ ತಾಲ್ಲೂಕಿನ ಅರಕೇರಾ ಪಟ್ಟಣದಲ್ಲಿ ರೋಗಕ್ಕೆ ತುತ್ತಾದ ಕರು
'ರೋಗ ಕಾಣಿಸಿದರೆ, ಶೀಘ್ರ ಚಿಕಿತ್ಸೆ ಪಡೆದುಕೊಳ್ಳಿ”
ಜಾನುವಾರುಗಳಿಗೆ ಸಣ್ಣ-ಪುಟ್ಟ ರೋಗ ಕಾಣಿಸಿದರೆ ರೈತರು ನಿರ್ಲಕ್ಷಿಸಬಾರದು.
ತಕ್ಷಣ ಪಶು ವೈದ್ಯರ ಬಳಿ ತಪಾಸಣೆ ಮಾಡಿಸಿ, ಸೂಕ್ತ ಚಿಕಿತ್ಸೆಗೆ ಒಳಪಡಿಸಬೇಕು. ಚರ್ಮಗಂಟು ರೋಗ ಸಾಂಕ್ರಾಮಿಕ ರೋಗವಾಗಿದ್ದು, ಒಂದರಿಂದ ಮತ್ತೊಂದು ಜಾನುವಾರುಗಳಿಗೆ ಹರಡುತ್ತದೆ. ರೈತರು ಮೊದಲೇ ಜಾಗೃತರಾಗಿ ಲಸಿಕೆ ಹಾಕಿಸಬೇಕು ಎಂದು ಅರಕೇರಾ ಪಶುಚಿಕಿತ್ಸಾಲಯ ಡಾ.ಪ್ರಕಾಶ ಅವರು ರೈತರಿಗೆ ಸಲಹೆ ನೀಡಿದ್ದಾರೆ.
ಜಾನುವಾರುಗಳಿಗೆ ಚರ್ಮಗಂಟು ರೋಗ ಮತ್ತೆ ಉಲ್ಬಣಗೊಂಡಿರುವುದು ಮಳೆ ಕೊರತೆಯಿಂದ ಸಂಕಷ್ಟದಲ್ಲಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಳೆದ ಎರಡು ವರ್ಷಗಳ ಹಿಂದೆ ಚರ್ಮಗಂಟು ರೋಗ ತೀವ್ರವಾಗಿತ್ತು. ನೂರಾರು ಜಾನುವಾರುಗಳು ಮೃತಪಟ್ಟಿದ್ದವು. ಕಳೆದ ವರ್ಷ ರೈತರು ರೋಗ ಭೀತಿಯಿಂದ ಜಾನುವಾರಗಳನ್ನು ಮಾರಾಟ ಮಾಡಿದ್ದರು. ಕೆಲವೊಬ್ಬರು ಮಾತ್ರ ಉಳಿಸಿಕೊಂಡಿದ್ದರು. ಜಾನುವಾರುಗಳನ್ನು ರೈತರಿಗೆ
ಚರ್ಮಗಂಟು ರೋಗದಿಂದ ಜಾನುವಾರುಗಳನ್ನು ಮಾರಾಟ ಮಾಡುವ ಅನಿವಾರ್ಯತೆ ಎದುರಾಗಿದೆ. ಪಶು ಸಂಗೋಪನೆ ಇಲಾಖೆಯವರು ಶೀಘ್ರ ಲಸಿಕೆ ಹಾಕಬೇಕು ನಿಂಗಣ್ಣ ನಾಯಕ ಹವಾಲ್ದಾರ, ಅರಕೇರಾ
ಅನೇಕ ಜಾನುವಾರು ಸಾಕುವುದೇ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ರೈತರು ಹೈನುಗಾರಿಕೆಯಿಂದ ದೂರ ಸರಿದಿದ್ದಾರೆ.
ಮುಖ್ಯ ಲಕ್ಷಣಗಳು:
ದೇಹದ ಮೇಲೆ ದೊಡ್ಡ ಗಂಟುಗಳು ಮತ್ತು ಕೀವು ತುಂಬಿದ ಬಾವುಗಳು.
ಬಾಯಿ, ಮೂಗು, ಕೆಚ್ಚಲು ಮತ್ತು ಜನನಾಂಗದ ಬಳಿ ಹುಣ್ಣುಗಳು.
ತೀವ್ರ ಜ್ವರ ಮತ್ತು ಹಾಲಿನ ಉತ್ಪಾದನೆಯಲ್ಲಿ ಇಳಿಕೆ.
ನಿಯಂತ್ರಣ ಮತ್ತು ಮುನ್ನೆಚ್ಚರಿಕೆಗಳು:
ಲಸಿಕೆ : ರೋಗ ಕಾಣಿಸಿಕೊಂಡ ಜಾನುವಾರುಗಳಿಗೆ ತಕ್ಷಣ ಲಸಿಕೆ ಹಾಕುವುದು.
ಸ್ವಚ್ಛತೆ : ಕೊಟ್ಟಿಗೆಯನ್ನು ಸ್ವಚ್ಛವಾಗಿಟ್ಟುಕೊಂಡು, ಸೊಳ್ಳೆ/ನೊಣಗಳ ಹಾವಳಿ ತಪ್ಪಿಸುವುದು.
ಪ್ರತ್ಯೇಕತೆ : ಸೋಂಕಿತ ಪಶುಗಳನ್ನು ಬೇರೆಡೆ ಇರಿಸುವುದು.
ನಾಟಿ ಔಷಧಿ : ಬೇವಿನ ಸೊಪ್ಪು, ಅರಿಶಿನ, ತುಳಸಿ ಮಿಶ್ರಣವನ್ನು ಗಾಯಗಳಿಗೆ ಹಚ್ಚುವುದು.
ಗಮನಿಸಿ : ಇದು ಮನುಷ್ಯರಿಗೆ ಹರಡುವುದಿಲ್ಲ, ಆದರೆ ಜಾನುವಾರುಗಳಲ್ಲಿ ಅತಿ ವೇಗವಾಗಿ ಹರಡುತ್ತದೆ.
1. ಚರ್ಮಗಂಟು ರೋಗ (Lumpy Skin Disease)
ಇದು ಪ್ರಸ್ತುತ ಹಸುಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿರುವ ವೈರಾಣು ರೋಗವಾಗಿದೆ.
ಲಕ್ಷಣಗಳು: ಹಸುಗಳ ಮೈಮೇಲೆ ಸಣ್ಣ ಸಣ್ಣ ಗಂಟುಗಳು ಕಾಣಿಸಿಕೊಳ್ಳುತ್ತವೆ. ತೀವ್ರ ಜ್ವರ, ಕಣ್ಣು ಮತ್ತು ಮೂಗಿನಿಂದ ನೀರು ಸುರಿಯುವುದು ಹಾಗೂ ಹಾಲಿನ ಇಳುವರಿ ಕಡಿಮೆಯಾಗುವುದು ಇದರ ಪ್ರಮುಖ ಲಕ್ಷಣಗಳು.
ಹರಡುವಿಕೆ: ಸೊಳ್ಳೆಗಳು, ನೊಣಗಳು ಮತ್ತು ಉಣ್ಣೆಗಳ ಕಡಿತದಿಂದ ಈ ರೋಗ ಹರಡುತ್ತದೆ.
2. ಸಾಮಾನ್ಯ ಚರ್ಮದ ಅಲರ್ಜಿ ಮತ್ತು ಸೋಂಕುಗಳು
ಹುಳಕಡ್ಡಿ (Ringworm): ಇದು ಶಿಲೀಂಧ್ರ (Fungus) ಸೋಂಕಿನಿಂದ ಉಂಟಾಗುತ್ತದೆ.
ಫೋಟೋಸೆನ್ಸಿಟೈಸೇಶನ್ (Photosensitisation): ಸೂರ್ಯನ ಬೆಳಕಿಗೆ ಚರ್ಮ ಅತಿಯಾಗಿ ಪ್ರತಿಕ್ರಿಯಿಸುವುದರಿಂದ ಚರ್ಮ ಕೆಂಪಗಾಗುವುದು ಮತ್ತು ಸುಲಿದು ಹೋಗುವುದು ಸಂಭವಿಸುತ್ತದೆ.
3. ಮನೆಮದ್ದು ಮತ್ತು ನಾಟಿ ಚಿಕಿತ್ಸೆ (Home Remedies)
ಜಾನುವಾರುಗಳ ಚರ್ಮದ ಸಮಸ್ಯೆಗೆ ಈ ಕೆಳಗಿನ ಮನೆಮದ್ದುಗಳನ್ನು ಬಳಸಬಹುದು:
ಲೇಪನಕ್ಕೆ: 100 ಗ್ರಾಂ ತುಳಸಿ, 50 ಗ್ರಾಂ ಅರಿಶಿಣ, 50 ಗ್ರಾಂ ಬೆಳ್ಳುಳ್ಳಿ ಮತ್ತು 100 ಗ್ರಾಂ ಕಹಿಬೇವನ್ನು ಅರೆದು ಬೇವಿನ ಎಣ್ಣೆಯಲ್ಲಿ ಕುದಿಸಿ ಗಾಯಗಳಿಗೆ ಹಚ್ಚಬೇಕು.
ಬೇವಿನ ಎಣ್ಣೆ: ಚರ್ಮದ ಸೋಂಕುಗಳನ್ನು ತಡೆಗಟ್ಟಲು ಬೇವಿನ ಎಣ್ಣೆಯ ಬಳಕೆ ಪರಿಣಾಮಕಾರಿ.
4. ಮುನ್ನೆಚ್ಚರಿಕೆ ಕ್ರಮಗಳು
ಶುಚಿತ್ವ: ಕೊಟ್ಟಿಗೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ಸೊಳ್ಳೆ-ನೊಣಗಳ ನಿಯಂತ್ರಣ ಮಾಡುವುದು ಅತೀ ಮುಖ್ಯ.
ಪ್ರತ್ಯೇಕಿಸುವುದು: ಕಾಯಿಲೆ ಬಂದ ಜಾನುವಾರುಗಳನ್ನು ಆರೋಗ್ಯವಂತ ಜಾನುವಾರುಗಳಿಂದ ತಕ್ಷಣವೇ ಪ್ರತ್ಯೇಕಿಸಿ.
ಲಸಿಕೆ: ಪಶುವೈದ್ಯರ ಸಲಹೆಯಂತೆ ಸಕಾಲಕ್ಕೆ ಲಸಿಕೆ ಹಾಕಿಸುವುದು ಅತ್ಯಗತ್ಯ.